ರೂಪಾಂತರಣ (ಭೂವಿಜ್ಞಾನದಲ್ಲಿ)- 
ಭೂಅಂತರಾಳದ ಆದಿಮ ಘನಶಿಲಾಪರಿಸರಕ್ಕೆ ಒದಗುವ ಸ್ಥಿರ ಇಲ್ಲದೆ ಅತ್ಯಧಿಕ ಅಧೋಮುಖ ಸಂಮರ್ದ (ನೇರ ಒತ್ತಡ), ಉಷ್ಣತೆ ಹಾಗೂ ಶಿಲಾದ್ರವಗಳಲ್ಲಾಗುವ ಯಾವುದೇ ಬದಲಾವಣೆ ಮುಂತಾದವೆಲ್ಲ ಮೂಲಶಿಲೆಗಳ ಮೇಲೆ ಒಟ್ಟಾರೆ ಪರಿಣಾಮ ಬೀರಿ, ಅಲ್ಲಿಯ ಶಿಲೆಗಳನ್ನು ಪರಿವರ್ತಿಸುವ ಪ್ರಕ್ರಿಯೆ (ಮೆಟಮಾರ್ಫಿಸಮ್). ಇದರಿಂದ ಆ ಶಿಲೆಗಳಲ್ಲಿರುವ ಖನಿಜಗಳು ಮತ್ತೆ ಸ್ಫಟಿಕೀಕರಣಗೊಂಡು, ಅವುಗಳ ರಚನಾವಿನ್ಯಾಸ, ವಿನಿಮಯ ಇಲ್ಲವೆ ರಾಸಾಯನಿಕ ಸಂಯೋಜನೆಯಲ್ಲಿ ಬದಲಾವಣೆ ಉಂಟಾಗುವುದು ಮಾತ್ರವಲ್ಲದೆ ಹೊಸ ಖನಿಜಗಳು ಉತ್ಪತ್ತಿಯಾಗುವುದು ಕೂಡ ಉಂಟು. ಸಾಮಾನ್ಯವಾಗಿ ಶಿಥಿಲೀಕರಣ (ವೆದರಿಂಗ್) ಮತ್ತು ಶಿಲೋತ್ಪತ್ತಿಗಳ (ಡಯಜೆನಿಸಿಸ್) ವ್ಯಾಪ್ತಿಯಲ್ಲಿ ಬರುವಂಥ ಬದಲಾವಣೆಗಳನ್ನು ಈ ಪ್ರಕ್ರಿಯೆಯಿಂದ ಹೊರತುಪಡಿಸಲಾಗಿದೆ.
ಭೂಮೇಲ್ಮೈಯಲ್ಲಿ ನಿರಂತರವಾಗಿ ಸಾಗುತ್ತಿರುವ ಶಿಥಿಲೀಕರಣ, ಸಾಗಣೆ ಮತ್ತು ಸಂಚಯನ ಕಾರ್ಯಗಳು, ಮೂಲ ಅಗ್ನಿಶಿಲೆಗಳಾದ ಬೆಸಾಲ್ಟ್‍ನಿಂದ ರೈಯಲೈಟ್‍ವರೆಗಿನ ಪರಮಾವಧಿ ಶಿಲಾಮಾದರಿಗಳನ್ನು ಶುದ್ಧ ಬೆಣಚು ಮರಳುಶಿಲೆಗಳಾಗಿ ಮಾರ್ಪಡಿಸುವ ಕ್ರಿಯೆ, ಅಧಿಕ ಮೊತ್ತದ ಅಲ್ಯೂಮಿನಿಯಮ್ ಇರುವ (ಪಿಲೈಟ್ಸ್) ಹಾಗೂ ಸುಣ್ಣದ ಕಾರ್ಬೊನೇಟ್‍ಗಳನ್ನು (ಸುಣ್ಣಶಿಲೆ ಮತ್ತು ಡಾಲೊಮೈಟ್) ರೂಪಾಂತರ ಶಿಲೆಗಳಾಗಿ ಪರಿವರ್ತಿಸುವ ಕಾರ್ಯಗಳು ಇವೆಲ್ಲ ನಿರಂತರ ಜರಗುತ್ತಿರು ವುವು. ಆದ್ದರಿಂದ ಈ ವಿಧದ ಜ್ವಾಲಾಮುಖಿಜ ಮತ್ತು ಜಲಶಿಲೆಗಳೇ ರೂಪಾಂತರ ಶಿಲೆಗಳಾಗಿ ಮಾರ್ಪಡಲು ಮೂಲ ಶಿಲಾಸಾಮಗ್ರಿಯಾಗುತ್ತವೆ. ಉಷ್ಣತೆ, ಒತ್ತಡ, ಶಿಲಾದ್ರವ ಸಂಯೋಜನೆ, ಸಂಪರ್ಕಶಿಲೆಗಳ ಸಂಯೋಜನೆ ಹಾಗೂ ಪ್ರತಿಕ್ರಿಯೆಯ ಗತ್ಯಾತ್ಮಕ ಶಕ್ತಿ ಎಂಬ ಐದು ಕಾರಣೀಭೂತ ಸಂದರ್ಭಗಳೇ ರೂಪಾಂತರಣ ಕ್ರಿಯೆಗೆ ಬಲು ಮುಖ್ಯವೆನಿಸಿವೆ. ಉಷ್ಣತೆ ಎಂಬುದು ರೂಪಾಂತರ ಪ್ರಕ್ರಿಯೆಯನ್ನು ಹೆಚ್ಚಿಸಬಲ್ಲದು. ಅಲ್ಲದೆ ಪ್ರತಿಕ್ರಿಯೆಗೆ ಅನುಕೂಲವಾಗು ವಂತೆ ಉಷ್ಣತೆ ಹಾಗೆಯೇ ಮುಂದುವರಿಯುವುದರಿಂದ ಖನಿಜಗಳು ಮತ್ತೆ ಸ್ಫಟಿಕೀಕರಣಗೊಳ್ಳಲು ಸಹಾಯಮಾಡುವುದೇ ಅಲ್ಲದೆ, ದ್ರವರೂಪ ಶಿಲೆಯಿಂದ ಬಾಷ್ಪವನ್ನೂ ಉತ್ಪತ್ತಿಮಾಡುವುದಾಗಿದೆ. ರೂಪಾಂತರ ಪ್ರಕ್ರಿಯೆ ಸಾಮಾನ್ಯವಾಗಿ 1500-2000ಸೆ ಉಷ್ಣತೆಯಲ್ಲಿ ನಡೆಯುವುದು. ಇನ್ನೂ ಅತ್ಯಧಿಕ ಉಷ್ಣತೆಯಲ್ಲಿ ಶಿಲೆಯನ್ನು ಅರ್ಧದ್ರವರೂಪಕ್ಕೆ ಪರಿವರ್ತಿಸುವ ಕಾರ್ಯ ಆರಂಭವಾಗುತ್ತದೆ. ಅನಂತರ ಈ ಸ್ಥಿತಿಯಲ್ಲಿಯ ದ್ರವ ತಣ್ಣಗಾಗುವುದರಿಂದ, ಅಗ್ನಿಶಿಲೆ ಮತ್ತು ರೂಪಾಂತರಶಿಲೆಗಳ ಮಿಶ್ರಣದಂತಿರುವ ಮಿಗ್ಮಟೈಟ್‍ನಂಥ ಶಿಲೆ ರೂಪುಗೊಳ್ಳುವುದು. ಖಂಡೀಯ ತೊಗಟೆ (ಕಾಂಟಿನೆಂಟಲ್ ಕ್ರಸ್ಟ್) ಏನಾದರೂ ಜಲಯುಕ್ತ ವಾಗಿದ್ದರೆ, ಆಗ ಶಿಲೆ ಅಲ್ಪ ಒತ್ತಡ ಹಾಗೂ 10000ಸೆ ಉಷ್ಣತೆಯಲ್ಲಿ ದ್ರವಿಸಿ ಶಿಲಾದ್ರವವಾಗುತ್ತದೆ. ಶಿಲೆಗಳ ಮೇಲೆ ಅಧಿಕ ಒತ್ತಡವೇನಾದರೂ ಇದ್ದರೆ, ಕಡಮೆ ಉಷ್ಣತೆಯಲ್ಲೇ (ಸು. 6500ಸೆ) ಶಿಲೆ ದ್ರವಿಸಿಹೋಗು ವುದು. 

ರೂಪಾಂತರ ಪ್ರಕ್ರಿಯೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ಮೂರು ಬಗೆಯ ಒತ್ತಡಗಳನ್ನು ಗುರುತಿಸಲಾಗಿದೆ: ಭೂಮಿಯ ಆಳ ಹೆಚ್ಚಾದಂತೆಲ್ಲ ಒತ್ತಡವೂ ಹೆಚ್ಚುತ್ತ ಹೋಗುವುದು. 1ಕಿಮೀ ಆಳದಲ್ಲಿ 250-300 ಬಾರ್ಸ್ ಒತ್ತಡವಿರುವುದು. ಶಿಲೆಗಳ ಭಾರದಿಂದ ಉದ್ಭವಿಸುವ ಒತ್ತಡವನ್ನು Pಟ (ಪ್ರೆಷರ್ ಡ್ಯೂ ಟು ಲೋಡ್) ಎಂಬ ಪ್ರತೀಕದಿಂದಲೂ ಶಿಲಾದ್ರವದ ಒತ್ತಡವನ್ನು Pಜಿ (ಪ್ರೆಷರ್ ಡ್ಯೂ ಟು ಫ್ಲೂಯಿಡ್) ಎಂಬ ಪ್ರತೀಕದಿಂದಲೂ ಚಾಲನೆ ಸಹಿತವಾಗಿರುವ ಅಧೋಮುಖ ಒತ್ತಡವನ್ನು (ಪ್ರೆಷರ್ ಡ್ಯೂ ಟು ಸ್ಟ್ರೆಸ್) (Ps) ಎಂಬ ಪ್ರತೀಕದಿಂದಲೂ ಸೂಚಿಸುವುದಿದೆ. ಶಿಲಾದ್ರವದೊಡನೆ ಬಾಷ್ಪ ಸೇರಿದರೆ Pಜಿ ದ್ವಿಗುಣಗೊಳ್ಳುತ್ತದೆ. ರೂಪಾಂತರಣದ ಎಲ್ಲ ಪ್ರಕ್ರಿಯೆಗಳಲ್ಲೂ Pಟ ಎಂಬುದು Pಜಿ ಗೆ ಸಮವಿರುತ್ತದೆ. ವಿವಿಧ ಒತ್ತಡಗಳೊಡನೆ ನೀರು ಮತ್ತು ಕಾರ್ಬನ್ ಡೈ ಆಕ್ಸೈಡುಗಳು ಬಿಡಿಯಾಗಿಯೋ ಜೊತೆಜೊತೆಯಾಗಿಯೋ ಒಟ್ಟುಗೂಡಿ ರೂಪಾಂತರಪ್ರಕ್ರಿಯೆಗೆ ಅಧಿಕ ಪರಿಣಾಮಕಾರಿಯಾಗುವುವು.		
(ಟಿ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ